BBK SEASON 10: ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ತನಿಷಾ; ಕಾರಣವೇನು?

Mahanteshk thumbnail
Posted: 1 years ago
#1

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಶೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಸ್ಪರ್ಧಿಗಳ ಜಗಳ, ಸ್ನೇಹ, ಕಿತ್ತಾಟಗಳಿಂದ ಸದ್ದು ಮಾಡುತ್ತಿರುವ ಬಿಗ್‌ ಬಾಸ್‌ ಮನೆಯಲ್ಲಿ ಅವಘಡವೊಂದು ನಡೆದಿದೆ ಎನ್ನಲಾಗಿದೆ. ಟಾಸ್ಕ್‌ ನಡುವೆ ಗಾಯಗೊಂಡ ತನಿಷಾ ಕುಪ್ಪಂಡ (Tanisha Kuppanda) ಚಿಕಿತ್ಸೆಗಾಗಿ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

ಪ್ರಬಲ ಸ್ಪರ್ಧಿಯಾಗಿರುವ ತನಿಷಾ ಕುಪ್ಪಂಡ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು ಚಿಕಿತ್ಸೆಗಾಗಿ ಅವರನ್ನು ಮನೆಯಿಂದ ಕಳುಹಿಸಲಾಗಿದೆಯಂತೆ.

ಎಂದಿನಂತೆ ಬಿಗ್‌ ಬಾಸ್‌ ಸ್ಪರ್ಧಿಗಳ ಎರಡು ತಂಡ ಮಾಡಿ ಟಾಸ್ಕ್‌ ಕೊಟ್ಟಿದ್ದರು. ಅದರ ಪ್ರಕಾರ, ಒಂದು ತಂಡದವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತಂದು ದೂರದಲ್ಲಿ ಇಟ್ಟಿರುವ ಕೊಳವೆಯೊಂದರಕ್ಕೆ ತುಂಬಿಸಬೇಕಿತ್ತು. ಕೊಳವೆಯೊಳಗೆ ಹೋದ ನೀರು ಗಾಜಿನ ಬಾಕ್ಸ್‌ನಲ್ಲಿ ಶೇಖರ ಆಗುತ್ತಿತ್ತು. ಎದುರು ತಂಡದವರು ಇದಕ್ಕೆ ಅಡ್ಡಿ ಪಡಿಸಬಹುದಿತ್ತು. ಯಾರು ಹೆಚ್ಚು ನೀರು ಹಾಕುತ್ತಾರೋ ಅವರು ವಿನ್ ಆಗುತ್ತಾರೆ ಎಂದು ಬಿಗ್‌ ಬಾಸ್‌ ಹೇಳಿದ್ದರು. ಅದರಂತೆ ಎರಡು ತಂಡಗಳು ಅಖಾಡಕ್ಕೆ ಇಳಿದಿದ್ದವು.

ಒಂದು ತಂಡದಲ್ಲಿ ಡ್ರೋನ್ ಪ್ರತಾಪ್‌, ಪವಿ ಪೂವಪ್ಪ, ತುಕಾಲಿ ಸಂತೋಷ್‌, ನಮ್ರತಾ, ವರ್ತೂರು, ಸಿರಿ ಇದ್ದರೆ ಇನ್ನೊಂದು ತಂಡದಲ್ಲಿ ಮೈಕಲ್, ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ಇದ್ದರು. ಈ ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ನೇರ ನಡೆನುಡಿಯ ತನಿಷಾ ಮೊದಲಿನಿಂದಲೂ ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ತನಿಷಾ ಅವರಿಗೆ ಏನಾಗಿದೆ? ಯಾವಾಗ ಮತ್ತೆ ಬಿಗ್‌ ಬಾಸ್ ಮನೆಗೆ ಮರಳಲಿದ್ದಾರೆ? ಎಂದು ಅಭಿಮಾನಿಗಳು ಪ್ರಶ್ನಿಸತೊಡಗಿದ್ದಾರೆ.

20 ಮೆಣಸಿನಕಾಯಿ ತಿಂದಿದ್ದ ತನಿಷಾ

ಈ ಹಿಂದೆ ಟಾಸ್ಕ್‌ನಲ್ಲಿ ಸವಾಲು ಸ್ವೀಕರಿಸಿದ್ದ ತನಿಷಾ 20 ಮೆಣಸಿನಕಾಯಿಯನ್ನು ತಿಂದು ಗಮನ ಸೆಳೆದಿದ್ದರು. ಕಾರ್ತಿಕ್, ವರ್ತೂರು ಸಂತೋಷ್ ಜತೆ ಅವರು ಉತ್ತಮ ಸ್ನೇಹವನ್ನು ಕಾಪಾಡಿಕೊಂಡಿದ್ದಾರೆ. ಈ ಬಾರಿ ತನಿಷಾ ನಾಮಿನೇಟ್ ಆಗಿದ್ದರು. ಅವರನ್ನು ಸೇವ್ ಮಾಡುವಂತೆ ಕಾರ್ತಿಕ್ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿಯಾಗಿದ್ದ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಕೆಲವು ದಿನಗಳ ಹಿಂದೆ ತನಿಷಾ ಹಾಗೂ ಸಂಗೀತಾ ಮಧ್ಯೆ ವಾಗ್ವಾದ ನಡೆದಿತ್ತು. ಸದ್ಯ ತನಿಷಾ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದು ತಿಳಿದು ಬಂದಿಲ್ಲ. ಅವರು ಆದಷ್ಟು ಬೇಗ ಗುಣಮುಖರಾಗಿ ಬಿಗ್‌ ಬಾಸ್‌ ಮನೆಗೆ ಮರಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.


Source: vistaranews.com

Created

Last reply

Replies

1

Views

2.1k

Users

2

Frequent Posters

Bodhianveshika thumbnail
Republic Rhythms Aazadi Quest Volunteer Thumbnail Visit Streak 500 Thumbnail + 6
Posted: 1 years ago
#2

Big Boss 10 bagge Berondu thread illadirodari daille reply madtideeni.

Yaake endu Sudeep avaru, Vinay Gowda avaranna avara vyavahaarakke teekisilla?

BigBoss Kannada nijavagiyu bahalha chennagi nadedukondu bandide. Adare pratiyondu Season nallu obba contest ene madadru avaranna shikshe athava teeke madade irodu bahalha ketta munnudiyagi toratte.


Colors Kannada Vaahini haagu Sudeep avaru kooda idanna gamanakke togobeku.

Edited by Bodhianveshika - 1 years ago

Related Topics

Sensational South Thumbnail

Posted by: Pallanguzhi

4 years ago

Pandiyan Stores - Season 2 (page 58 onwards)

Anyone else here following the series? Moorthy Dhanam valaikappu episodes going on ... Looks like Dhanam is returning to her beloved Pandiyan...

Expand ▼
Top

Stay Connected with IndiaForums!

Be the first to know about the latest news, updates, and exclusive content.

Add to Home Screen!

Install this web app on your iPhone for the best experience. It's easy, just tap and then "Add to Home Screen".